ಶ್ರೀಕಂಠ ವಿಷಕಂಠ

ಅನುರಾಗ ಅರಳಿತು
ಡಾ|| ರಾಜ್ ಕುಮಾರ್
ಚಿ. ಉದಯಶಂಕರ್
ಉಪೇಂದ್ರ ಕುಮಾರ್

ಶ್ರೀಕಂಠ ವಿಷಕಂಠ ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ

ಗತಿ ನೀನೆಂದರೆ ಒಡುತ ಬರುವ ಕರುಣಾ ಸಾಗರನೇ|| ಪ ||

ಹರಿಯುವ ನದಿಯಲಿ ಕಲರವ ನಾದ ಕೂಡ ಶಿವಶಿವ ಎನ್ನುತಿದೆ

ಅರಳಿದ ಸುಮದಲಿ ನಲಿಯುವ ಭ್ರಮರವು ಶಿವನಾಮ ಹಾಡುತಿದೆ

ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೆ|| 1 ||>

ಸಾವಿ ಜನುಮವೆ ಬಂದರು ಹೀಗೆ ನಿನ್ನ ಸನ್ನಿದಿಯಲಿ ಇರಿಸು

ಉಸಿರಿನ ಉಸಿರಲಿ ತಂದೆ ಎಂದು ನಿನ ನಾಮವನು ಬೆರೆಸು

ಕತ್ತಲಲಿರುವೆ ನೆಮ್ಮದಿ ತುಂಬಿ ಕೈ ಹಿಡಿದು ನಡೆಸು|| 2 ||

ಅನುರಾಗ ಅರಳಿತು

ಚಿತ್ರ ನೋಡಿ